ರಾಜ್ಯನಾನು ಭ್ರಷ್ಟಾಚಾರಿಯಲ್ಲ, ಷಡ್ಯಂತ್ರ ನಡೆಯುತ್ತಿದೆ: ಅಬಕಾರಿ ಸಚಿವ ಹೆಚ್. ನಾಗೇಶ್
ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಅಬಕಾರಿ ಸಚಿವರೂ ಆಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದು, ತಾವು ಭ್ರಷ್ಟಾಚಾರಿ ಅಲ್ಲ. ಯಾವುದೇ ಲಂಚ ತೆಗದುಕೊಂಡಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಎಲ್ಲಿ ಬೇಕಾದರೂ ಬಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.