ರಾಜ್ಯಸರ್ಕಾರಿ ಸೇವೆ ವಿಳಂಬಕ್ಕೆ ಪರಿಹಾರ ಪಡೆಯುವುದು ನಾಗರಿಕರ ಹಕ್ಕು: ಸಚಿವ ಸುರೇಶ್ ಕುಮಾರ್
ಸರ್ಕಾರದಿಂದ ದೊರೆಯಬಹುದಾದ ಲಭ್ಯ ಸೇವೆಗಳನ್ನು ಪಡೆಯುವುದು ಮತ್ತು ಸೇವೆಗಳು ವಿಳಂಬವಾದರೆ ಆ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು ಆಗಿರುವುದರಿಂದ ಸಾರ್ವಜನಿಕರು ಈ ಕುರಿತು ಹೆಚ್ಚು ಜಾಗೃತರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ಅವರು ಕರೆ ನೀಡಿದ್ದಾರೆ.