ದೇಶಗಲ್ವಾನ್ ಕಣಿವೆ ಸಂಘರ್ಷ: ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ವಿರೋಧ ಪಕ್ಷಗಳ ಆಗ್ರಹ, ಬಿಜೆಪಿ ನಕಾರ
ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ರಾತ್ರಿ ಎರಡೂ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಆದಷ್ಟು ಶೀಘ್ರದಲ್ಲಿ ಕರೆಯಬೇಕೆಂದು ವಿರೋಧ ಪಕ್ಷಗಳ ಹಲವು ನ್ಯಾಯ ತಜ್ಞರ ತಂಡ ಒತ್ತಾಯಿಸಿವೆ.