ರಾಜ್ಯಕಲಬುರಗಿ: ಬಸ್ ವ್ಯವಸ್ಥೆ ಮಾಡಿ ಅತಂತ್ರ ವಲಸಿಗರಿಗೆ ನೆರವಾದ ಸಂಸದ ಉಮೇಶ್ ಜಾಧವ್
ಸೋಮವಾರ ಮುಂಬೈನ ಥಾಣೆಯಿಂದ ಕಲಬುರಗಿಗೆ ಹೊರಟ "ಶ್ರಮಿಕ್" ವಿಶೇಷ ರೈಲು ಭರ್ತಿಯಾಗಿದ್ದರಿಂದ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಬಸ್ಸು ಗಳ ವ್ಯವಸ್ಥೆ ಮಾಡಿ,ಈ ವಲಸಿಗರನ್ನು ಅವರವರ ಊರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.