ದೇಶಡಿಸೆಂಬರ್ 13ರಂದು ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ; ದೆಹಲಿಯಲ್ಲಿ ಹೈ ಅಲರ್ಟ್
2001ರ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಗುರುತಿಸುವ ದಿನವಾದ ಡಿಸೆಂಬರ್ 13ರಂದು 'ಸಂಸತ್ತಿನ ಅಡಿಪಾಯವನ್ನು ಬುಡಮೇಲು ಮಾಡುವುದಾಗಿ' ಬೆದರಿಕೆಯೊಡ್ಡುವ ವಿಡಿಯೋ ಸಂದೇಶವನ್ನು ಯುಎಸ್ ಮೂಲದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನು ಬಿಡುಗಡೆ ಮಾಡಿದ್ದು, ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ.