ಸಂಡೂರು ಉಪಚುನಾವಣೆ

ಸಂಡೂರು ಉಪಚುನಾವಣೆ ಸೋಲು: ಕಮಲ ಪಾಳಯದಲ್ಲಿ ಬಂಡಾಯದ ಕಿಡಿ; ಶ್ರೀರಾಮುಲು ಬೆನ್ನಿಗೆ ನಿಂತ ಕಾರ್ಯಕರ್ತರು!
ಶ್ರೀರಾಮಲು ಜೊತೆಗೆ ಪಕ್ಷ ನಡೆದುಕೊಂಡು ರೀತಿ ಸರಿಯಲ್ಲ ಎಂದಿರುವ ಬಿಜೆಪಿ ಕಾರ್ಯಕರ್ತರು, ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನ ಭೇಟಿ ಮಾಡಲು ಮುಂದಾಗಿದೆ.

ಸಂಡೂರು ಉಪಚುನಾವಣೆ: ಬಂಗಾರು ಹನುಮಂತ ಸೋಲಿನಿಂದ ಗಾಲಿ ಜನಾರ್ದನ ರೆಡ್ಡಿಗೆ ಭಾರೀ ಹಿನ್ನಡೆ
ಉಪಚುನಾವಣೆಯಲ್ಲಿ ಚುನಾಯಿತ ಕಾಂಗ್ರೆಸ್ ಶಾಸಕ ಇ ಅನ್ನಪೂರ್ಣ ತುಕಾರಾಂ ಅವರಿಗೆ ಸಮಬಲದ ಪೈಪೋಟಿ ನೀಡಿದ ಸಂತಸದಲ್ಲಿ ಬಿಜೆಪಿ ಇದ್ದರೂ, ಫಲಿತಾಂಶ ಜನಾರ್ಧನ ರೆಡ್ಡಿಯವರಿಗೆ ಭಾರೀ ನಿರಾಸೆಯನ್ನು ತಂದಿದೆ.

ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ; ಕ್ಷೇತ್ರಕ್ಕೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತರುವುದು ನನ್ನ ಗುರಿ: ಅನ್ನಪೂರ್ಣ ತುಕಾರಾಂ (ಸಂದರ್ಶನ)

ಸಂಡೂರಿನಲ್ಲಿ ಮತ್ತೆ 'ಕೈ' ಅಧಿಪತ್ಯ: ಪತಿಯಿಂದ ತೆರವಾದ ಸ್ಥಾನಕ್ಕೆ ಇನ್ಮುಂದೆ ಪತ್ನಿ ಶಾಸಕಿ; ಲಾಡ್ ರಣತಂತ್ರಕ್ಕೆ ಮುಗ್ಗರಿಸಿದ BJP
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು 83,967 ಮತಗಳನ್ನು ಪಡೆದು 9,649 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

Karnataka Bypoll Results 2024 LIVE Updates: ಮೂರು ಕ್ಷೇತ್ರಗಳೂ ಕಾಂಗ್ರೆಸ್ ಪಾಲು; ಚನ್ನಪಟ್ಟಣದಲ್ಲಿ ಸೈನಿಕನಿಗೆ ಗೆಲುವು; ನಿಖಿಲ್ ಗೆ ಹ್ಯಾಟ್ರಿಕ್ ಸೋಲು
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಮೂರೂ ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ.

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಎದೆಬಡಿತ ಹೆಚ್ಚಳ, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ
ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

ಸಂಡೂರು ಉಪಚುನಾವಣೆ: ಜನಾರ್ದನ ರೆಡ್ಡಿ ಗಣಿಗಾರಿಕೆ ಪ್ರಕರಣ ಈಗ ಕಾಂಗ್ರೆಸ್ ಪಕ್ಷಕ್ಕೆ ಟ್ರಂಪ್ ಕಾರ್ಡ್!
ಸಂಡೂರು ಉಪಚುನಾವಣೆಯ ಪ್ರಚಾರದ ವೇಳೆ ಪರಿಶಿಷ್ಟ ಪಂಗಡ ಕಲ್ಯಾಣ ಮಂಡಳಿ ನಿಧಿ ಹಣ ವರ್ಗಾವಣೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಕೂಡ ಕೌಂಟರ್ ಕೊಡುತ್ತಿದ್ದು ಅಕ್ರಮ ಗಣಿಗಾರಿಕೆ ಪ್ರಕರಣವನ್ನು ತನ್ನ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದೆ.

'ರಿಪಬ್ಲಿಕ್ ಆಫ್ ಬಳ್ಳಾರಿ' ಸಂಸ್ಕೃತಿಯಿಂದ ಸಂಡೂರು ರಕ್ಷಿಸಲು ಬಿಜೆಪಿಯನ್ನು ಸೋಲಿಸಬೇಕು: ಸಿದ್ದರಾಮಯ್ಯ
2013ರ ಬಳ್ಳಾರಿ ಪಾದಯಾತ್ರೆ ವೇಳೆ ಬಳ್ಳಾರಿ ಜನತೆಗೆ ಬೆಂಬಲ ನೀಡದಂತೆ ರೆಡ್ಡಿ ಎಚ್ಚರಿಕೆ ನೀಡಿದ್ದರು , ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಜನರು ಮಾತನಾಡಲೂ ಹೆದರುತ್ತಿರುವುದು ಕಂಡು ಬಂತು.

ಸಂಡೂರು ಉಪಚುನಾವಣೆ: ದಾಖಲೆ ಇಲ್ಲದ 27.50 ಲಕ್ಷ ರೂ ನಗದು ಹಣ ವಶಕ್ಕೆ
ಸಂಡೂರು ಉಪಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದ್ದು, ಪರಿಶೀಲನೆಯನ್ನು ತೀವ್ರಗೊಳಿಸಿದ್ದಾರೆ.

