ರಾಜ್ಯಬೆಳಗಾವಿ: ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿತ; ಸಂಕೇಶ್ವರ ಪಟ್ಟಣದಲ್ಲಿ ಉದ್ವಿಗ್ನತೆ, ಐವರ ವಿರುದ್ಧ ಎಫ್ಐಆರ್
ಛತ್ರಪತಿ ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜವನ್ನು ಹಾಕಿದ್ದಕ್ಕಾಗಿ ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣವು ಉದ್ವಿಗ್ನಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.