ಶ್ರೀಲಂಕಾ ಉಗ್ರ ದಾಳಿ

ಇಸ್ಲಾಮಿಕ್ ಸ್ಟೇಟ್ ಉಗ್ರರ ಹೆಡೆಮುರಿ ಕಟ್ಟಲು ಭಾರತದ ನೆರವು ಕೋರಿದ ಶ್ರೀಲಂಕಾ!
ಕಳೆದ ಈಸ್ಟರ್ ಸಂಡೇ ದಿನದಂದು ರಾಜಧಾನಿ ಕೊಲಂಬೋದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿರುವ ಶ್ರೀಲಂಕಾ, ಇಸ್ಲಾಮಿಕ್ ಸ್ಟೇಟ್ ಉಗ್ರರ ಹೆಡೆಮುರಿ ಕಟ್ಟಲು ಭಾರತದ ನೆರವು ಕೋರಿದೆ.

ಶ್ರೀಲಂಕಾ ದಾಳಿ ನಡೆಸಿದ ಉಗ್ರ ಸಂಘಟನೆಯ ಬಳಿ ಇದ್ದ ಆಸ್ತಿ ಎಷ್ಟು ಗೊತ್ತಾ?.. ಈ ಸುದ್ದಿ ಓದಿ ಬೆಚ್ಚಿ ಬೀಳ್ತೀರಾ..!
253 ಮಂದಿಯ ಮಾರಣ ಹೋಮ ನಡೆದಿದ್ದ ಶ್ರೀಲಂಕಾ ಉಗ್ರ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

ಶ್ರೀಲಂಕಾ ಉಗ್ರ ದಾಳಿ ಎಫೆಕ್ಟ್; 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ 600 ವಿದೇಶಿಗರ ಗಡಿಪಾರು!
ಭೀಕರ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಶ್ರೀಲಂಕಾದಲ್ಲಿ ನೆಲೆಯೂರಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಿದೆ.

ಶಿಕ್ಷಣ ಅಲ್ಲ, ಧಾರ್ಮಿಕ ಇಲಾಖೆಯಡಿಯಲ್ಲಿ ಮದರಾಸಗಳು: ಶ್ರೀಲಂಕಾ ಸರ್ಕಾರದ ದಿಟ್ಟ ನಿರ್ಧಾರ
ಇತ್ತೀಚೆಗಷ್ಟೇ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಮತ್ತು ಇತರೆ ಮುಖವಸ್ತ್ರಗಳ ಮೇಲೆ ನಿಷೇಧ ಹೇರಿದ್ದ ಶ್ರೀಲಂಕಾ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಇಷ್ಟು ದಿನ ಶಿಕ್ಷಣ ಇಲಾಖೆಯಡಿಯಲ್ಲಿದ್ದ ಮದರಸಾಗಳನ್ನು ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ.

ಶ್ರೀಲಂಕಾ ದಾಳಿ ನಡೆಸಿದ ಉಗ್ರರಿಗೆ ಬೆಂಗಳೂರು ನಂಟು: ಶ್ರೀಲಂಕಾ ಸೇನೆ
253 ಮಂದಿಯ ಸಾವಿಗೆ ಕಾರಣವಾಗಿದ್ದ ಈಸ್ಟರ್ ಸಂಡೇ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗೂ ಸಿಲಿಕಾನ್ ಸಿಟಿ ಬೆಂಗಳೂರಿಗೂ ನಂಟಿದೆ ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ
ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್ ಅಲ್-ಬಾಗ್ದಾದಿ ಹೇಳಿದ್ದಾನೆ.

ಮುಂಬೈ ದಾಳಿ-ಶ್ರೀಲಂಕಾ ದಾಳಿ, ಎರಡೂ ಉಗ್ರ ದಾಳಿಯಲ್ಲಿ ಬಚಾವ್ ಆದ ಭಾರತದ ಉದ್ಯಮಿ, ಪತ್ನಿ!
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ಉಗ್ರ ದಾಳಿ ಮತ್ತು ಕಳೆದ ಈಸ್ಟರ್ ಸಂಡೆಯಂದು ಕೊಲಂಬೋದಲ್ಲಿ ನಡೆದ ಉಗ್ರ ದಾಳಿ ಎರಡೂ ಉಗ್ರ ದಾಳಿಗಳಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗುವ ಮೂಲಕ ಭಾರತ ಮೂಲದ ದುಬೈ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಶ್ರೀಲಂಕಾದಲ್ಲಿ ರಾತ್ರಿ ಕರ್ಫ್ಯೂ ತೆರವುಗೊಳಿಸಿದ ಸರ್ಕಾರ
ಲಂಕಾ ರಾಜಧಾನಿ ಕೊಲಂಬೋದಲ್ಲಿ ಕಳೆದ ಈಸ್ಟರ್ ಸಂಡೇಯಂದು ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ಶ್ರೀಲಂಕಾ ಸರ್ಕಾರ ತೆರವುಗೊಳಿಸಿದೆ.

ಶ್ರೀಲಂಕಾ ಸೇನೆಯ ಕಾರ್ಯಾಚರಣೆ; ತನ್ನ ಮೂವರು ಉಗ್ರರ ಸಾವು ಎಂದ ಇಸಿಸ್
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿರುದ್ಧದ ಶ್ರೀಲಂಕಾ ಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ಶುಕ್ರವಾರದ ಕಾರ್ಯಾಚರಣೆಯಲ್ಲಿ ತನ್ನ ಮೂವರು ಉಗ್ರರು ಹತರಾಗಿದ್ದಾರೆ ಎಂದು ಇಸಿಸ್ ಒಪ್ಪಿಕೊಂಡಿದೆ.

