ರಾಜ್ಯಬೆಂಗಳೂರು: ಲೋಕಾಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಶಕ್ಕೆ
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಲೋಕಾಯುಕ್ತ ವಿಫಲವಾಗಿದೆ. ದೂರನ್ನು ತನಿಖೆಗೆ ಆದೇಶಿಸುವ ಅಥವಾ ಲೋಕಾಯುಕ್ತ ಠಾಣೆಗೆ ವರ್ಗಾಯಿಸುವ ಬದಲು ಮುಚ್ಚಿ ಹಾಕಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.