ಸಿನಿಮಾ ಸುದ್ದಿಗಮನ ಸೆಳೆಯುತ್ತಿದೆ 'ಸಿಕಾಡಾ' ಬಹುಭಾಷಾ ಸಿನಿಮಾ: ಆರು ಹಾಡುಗಳಿಗೆ ಎಲ್ಲಾ ಭಾಷೆಗಳಲ್ಲೂ ಪ್ರತ್ಯೇಕ ಟ್ಯೂನ್
ಕನ್ನಡ ಚಿತ್ರ 'ಸಿಕಾಡಾ' ಬಹುಭಾಷೆಗಳಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಚಿತ್ರತಂಡ ಸಿನಿಮಾವನ್ನು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿದರು.