ರಾಜ್ಯ'ನಾವು ಇಟ್ಟ ಹಣ ವಾಪಸ್ ಕೊಟ್ಬಿಡಿ ಸಾಕು': ಮಳೆ, ಚಳಿ, ಹಸಿವು ಲೆಕ್ಕಿಸದೆ ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಠೇವಣಿದಾರರ ಆಕ್ರೋಶ
ಶಾಂತಿನಗರದ ಬಿಎಂಟಿಸಿ ಕಾಂಪ್ಲೆಕ್ಸ್ನಲ್ಲಿರುವ ಶ್ರೀ ಕಣ್ವ ಸೌಹಾರ್ದ ಸಹಕಾರಿ ಕ್ರೆಡಿಟ್ ಲಿಮಿಟೆಡ್ನ ಸಾವಿರಾರು ಠೇವಣಿದಾರರಿಗೆ ನಿರಾಶೆ, ದುಃಖದಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಚಳಿ, ಮಳೆಯನ್ನು ಲೆಕ್ಕಿಸದೆ ಕರ್ನಾಟಕದಾದ್ಯಂತ ಮೂಲೆ ಮೂಲೆಗಳ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದು ಬಸ್ ಡಿಪೋದ ಪ್ಲಾಟ್ಫಾರ್ಮ್ಗಳ ಮೇಲೆ ಮಲಗಿ ರಾತ್ರಿ ಹಗಲು ಕಳೆಯುತ್ತಿ