ರಾಜ್ಯಟ್ರಾಫಿಕ್ ದಂಡ ಪಾವತಿಗೆ ರಿಯಾಯಿತಿ ನೀಡುವುದು ನಿಯಮ ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುತ್ತದೆ: ತಜ್ಞರ ಅಭಿಪ್ರಾಯ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲಿನ ಶೇ 50 ರಿಯಾಯತಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ಸಂಚಾರ ತಜ್ಞರು ಮತ್ತು ಕಾರ್ಯಕರ್ತರು ಅದನ್ನು ವಿರೋಧಿಸಿದ್ದಾರೆ. ರಿಯಾಯಿತಿ ಯೋಜನೆಯು ದಂಡವನ್ನು ವಿಧಿಸಿದ ಏಕೈಕ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.