ಶಿವಾನಂದ್ ಪಾಟೀಲ್

ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ರೈತರಿಗೆ ಪರಿಹಾರದ ಭರವಸೆ ನೀಡಿದ ಸಚಿವ ಶಿವಾನಂದ್ ಪಾಟೀಲ್
ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರಕಾರದಿಂದ ಇಲ್ಲವೇ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು.

ಪ್ರತಿಭಟನಾ ಸ್ಥಳಕ್ಕೆ ಸಚಿವ ಶಿವಾನಂದ್ ಪಾಟೀಲ್ ಭೇಟಿ: ರೈತರಿಗೆ ದರ ನಿಗದಿ ಆದೇಶ ಪ್ರತಿ ಹಸ್ತಾಂತರ
ಸಚಿವ ಶಿವಾನಂದ್ ಪಾಟೀಲ್ ಲಿಖಿತ ಆದೇಶವನ್ನು ಮಂಡಿಸುತ್ತಿದ್ದಂತೆ, ಸಂತೋಷಗೊಂಡ ರೈತರು ಕೃತಜ್ಞತೆಯ ಸಂಕೇತವಾಗಿ ಜಿಲ್ಲಾ ಅಧಿಕಾರಿಗಳ ಮೇಲೆ ಹೂವುಗಳನ್ನು ಸುರಿಸಿದರು.

ನಿಲ್ಲದ ಕಬ್ಬು ಸಮರ: ಸಚಿವ ಶಿವಾನಂದ್ ಪಾಟೀಲ್ ಮನವಿಗೂ ಜಗ್ಗದ ರೈತರು; 3,500 ದರ ಘೋಷಿಸದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದು ಪಟ್ಟು!
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಗುರುವಾರ ತಡರಾತ್ರಿ ಗುರ್ಲಾಪುರದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಉದ್ದೇಶಿತ ರಸ್ತೆ ತಡೆಯನ್ನು (ಶುಕ್ರವಾರ) ಹಿಂತೆಗೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಸಕ್ಕರೆ ರಫ್ತು ಮಾಡಲು ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ: ಸಚಿವ ಶಿವಾನಂದ ಪಾಟೀಲ್ ಒತ್ತಾಯ
ಮೂರು ವರ್ಷಗಳಿಂದ ಸಕ್ಕರೆ ರಫ್ತಿನ ಮೇಲೆ ಹೇರಿರುವ ನಿಷೇಧವನ್ನು ಕೈಬಿಡಬೇಕು. ರೈತರ ಕಬ್ಬಿನ ಬಿಲ್ ಪಾವತಿಗೆ ಸಕ್ಕರೆ ಕಾರ್ಖಾನೆಗಳ ಬಳಿ ಪ್ರತ್ಯೇಕ ಬಂಡವಾಳ ಇಲ್ಲ. ಸಕ್ಕರೆ ರಫ್ತಿಗೆ ಅನುಮತಿ ಸಿಕ್ಕರೆ, ಉತ್ತಮ ದರ ಸಿಗುತ್ತದೆ.

ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಿ: ಶಿವಾನಂದ್ ಪಾಟೀಲ್'ಗೆ ಯತ್ನಾಳ್ ಸವಾಲು
ಶಿವಾನಂದ ಪಾಟೀಲ್ ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು, ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದ.

ಬರ ಸಂಕಷ್ಟ: ಸಕ್ಕರೆ ಉತ್ಪಾದನೆ ಕಡಿಮೆ; ಸಚಿವ ಶಿವಾನಂದ್ ಪಾಟೀಲ್
ರಾಜ್ಯದಲ್ಲಿ ಬರದ ಪರಿಣಾಮ ಈ ವರ್ಷ ಬೆಳೆ ಇಳುವರಿ ಕುಸಿತಗೊಂಡಿದ್ದು, ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.

ಶಾಸಕರ ಪತ್ರಕ್ಕೂ, ಸಚಿವರ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ; ಸಚಿವ ಶಿವಾನಂದ ಪಾಟೀಲ್
ಸರ್ಕಾರ ರಚನೆ ಬಳಿಕ ಸಂಪುಟದ ಹಿರಿಯ ಸಚಿವರು, ನಾಯಕರನ್ನು ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಆದರೆ, ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ ಬರೆದ ಪತ್ರಕ್ಕೂ, ಸಚಿವರ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಇದು ಕಾಕತಾಳೀಯವಷ್ಟೇ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.

