ರಾಜ್ಯ20x30 ಬದಲಿಗೆ 30x40 ಚದರ ಅಡಿ ನಿವೇಶನಗಳ ನೀಡಿ ಎಂದು ಡಿಕೆ.ಶಿವಕುಮಾರ್ ಸೂಚನೆ; ಸಾಧ್ಯವಿಲ್ಲ ಎಂದ ಸಮಿತಿ
20x30 ಚದರ ಅಡಿ ನಿವೇಶನಗಳ ಬದಲಿಗೆ 30x40 ಚದರ ಅಡಿ, 50x80 ಚದರ ಅಡಿ ಅಳತೆಯ ನಿವೇಶನಗಳ ನೀಡುವ ಕುರಿತು ಪರಿಶೀಲಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ರಚಿಸಲಾಗಿರುವ ಸಮಿತಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ. ಆದರೆ, ಸೂಚನೆ ಪಾಲನೆ ಸಾಧ್ಯವಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ.