ರಾಜ್ಯಶಕ್ತಿ ಯೋಜನೆಗೆ ಚಾಲನೆ: ಬಸ್ ಚಲಾಯಿಸಿದ ಕೆಜಿಎಫ್ ಶಾಸಕಿ ರೂಪಕಲಾ
ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಕೆಜಿಎಫ್ ಶಾಸಕಿ ರೂಪಕಲಾ ಚಾಲನೆ ನೀಡಿದ್ದು, ಈ ವೇಳೆ ರಾಬರ್ಟಸನ್ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಬಸ್ ಚಲಾಯಿಸಿ ನೆರೆದಿದ್ದವರ ಗಮನ ಸೆಳೆದರು.