ಶಾಸಕ ಹ್ಯಾರಿಸ್

ಶಾಸಕ ಹ್ಯಾರಿಸ್ ಗಾಯಗೊಂಡಿದ್ದು ಬಾಂಬ್ ಸ್ಫೋಟದಿಂದಲ್ಲ, ಪಟಾಕಿ ಸಿಡಿತದಿಂದ: ಪೊಲೀಸರ ತನಿಖೆಯಿಂದ ಖಚಿತ
ಶಾಂತಿನಗರದ ಕಾಂಗ್ರೆಸ್ ಶಾಸಕ ಎಸ್.ಎ.ಹ್ಯಾರಿಸ್ ಅವರು ಪಾಲ್ಗೊಂಡಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸ್ಫೋಟಗೊಂಡಿದ್ದು ಪಟಾಕಿಯೇ ಹೊರತು ಬೇರಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂದು ಪೊಲೀಸರು ತನಿಖೆಯಿಂದ ಖಚಿತಪಡಿಸಿದ್ದಾರೆ.

ಮಲ್ಯ ಆಸ್ಪತ್ರೆ ಬಳಿ ನಲಪಾಡ್ ಗ್ಯಾಂಗ್ ನನ್ನ ಮೇಲೂ ಹಲ್ಲೆ ಮಾಡಿತ್ತು: ವಿದ್ವತ್ ಸಹೋದರನ ಹೇಳಿಕೆ
ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ವಿದ್ವತ್ ಸಹೋದರ ಸಾತ್ವಿಕ್ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ತನ್ನ ಮೇಲೂ ನಲಪಾಡ್ ಗ್ಯಾಂಗ್ ಹಲ್ಲೆ ಮಾಡಿತು ಎಂದು ಹೇಳಿದ್ದಾರೆ.

