ರಾಜಕೀಯಶಾಸಕ ಹರೀಶ್ ಪೂಂಜ ಬಂಧಿಸಿದರೆ ಮುಂದಿನ ಬೆಳವಣಿಗೆಗೆ ಸರ್ಕಾರವೇ ಹೊಣೆ: ಬಿ.ವೈ. ವಿಜಯೇಂದ್ರ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಖಂಡನೀಯ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚುನಾವಣಾ ನೀತಿಸಂಹಿತೆ ನೆಪವೊಡ್ಡಿ ಇದರ ಆಧಾರದಲ್ಲಿ ಶಾಸಕರನ್ನು ಬಂಧಿಸಿದರೆ ಪಕ್ಷ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಮುಂದಿನ ಬೆಳವಣಿಗೆಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.