ರಾಜ್ಯಚನ್ನಪಟ್ಟಣ: ಭಾರಿ ಮಳೆ, ಪ್ರವಾಹಕ್ಕೆ ಮುಳುಗಿದ ಶಾಲೆ; ದೇವಸ್ಥಾನದಲ್ಲಿ ಅಕ್ಷಾರಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು!
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತತ್ತರಿಸಿ ಮೂರು ವಾರಗಳೇ ಕಳೆದರೂ, ಹಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ. ಭಾರಿ ಮಳೆ, ಪ್ರವಾಹಕ್ಕೆ ಸರ್ಕಾರಿ ಶಾಲೆಯೊಂದು ಮುಳುಗಿದ್ದು, ವಿದ್ಯಾರ್ಥಿಗಳು ಬೇರೆ ಮಾರ್ಗವಿಲ್ಲದೇ ಸ್ಥಳೀಯ ದೇವಸ್ಥಾನದಲ್ಲಿ ಪಾಠ ಕೇಳುವಂತಾಗಿದೆ.