ದೇಶಶಾಲಾ ಶಿಕ್ಷಕರ ನೇಮಕಾತಿ ಹಗರಣ: ಅಭಿಷೇಕ್ ಬ್ಯಾನರ್ಜಿಗೆ ಸಿಬಿಐ ಸಮನ್ಸ್
ಶಾಲಾ ಉದ್ಯೋಗ ಹಗರಣದ ತನಿಖೆಯ ಭಾಗವಾಗಿ ಶನಿವಾರ ವಿಚಾರಣೆಗಾಗಿ ಹಾಜರಾಗುವಂತೆ ಟಿಎಂಸಿ ನಾಯಕ ಅಭಿಷೇಖ್ ಬ್ಯಾನರ್ಜಿ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಕೊಲ್ಕತ್ತಾದ ನಿಜಮ್ ಪ್ಯಾಲೇಸ್ ನಲ್ಲಿರುವ ಕಚೇರಿಯಲ್ಲಿ ತನಿಖೆಗೆ ಹಾಜರಾಗುವಂತೆ ಬ್ಯಾನರ್ಜಿ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.