ರಾಜ್ಯನರಹಂತಕ ಹುಲಿಗಾಗಿ ತೀವ್ರ ಹುಡುಕಾಟ: ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಬೇಟೆಗಾರ ಶಫತ್ ಅಲಿಗೆ ಸೂಚನೆ
2 ರೈತರನ್ನು ಬಲಿ ತೆಗೆದುಕೊಂಡಿದ್ದ ನರಹಂತಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತೀವ್ರವಾಗಿ ಹುಡುಕಾಟ ನಡೆಯುತ್ತಿದ್ದು, ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಖಾಸಗಿ ಬೇಟೆಗಾರರಾದ ಶಫತ್ ಅಲಿ ಹಾಗೂ ಅವರ ಪುತ್ರ ಅಸ್ಗರ್ ಅಲಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.