ವ್ಯಾಪಾರಸ್ಥರು

ಚಿಕ್ಕಪೇಟೆಯಲ್ಲಿ ಇನ್ನೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ: ವ್ಯಾಪಾರಸ್ಥರಿಗೆ ನಷ್ಟ; BBMP ಗೆ ಹಿಡಿಶಾಪ!
ಮೆಟ್ರೋ ಜಂಕ್ಷನ್ ಬಳಿ ಕಾಮಕಾರಿ ಕೆಲಸ ಬಾಕಿಯಿದ್ದು, ಅಲ್ಲಿ ಗಂಟೆಗೆ ಸಾವಿರಾರು ಜನರು ಮತ್ತು ವಾಹನಗಳು ಹಾದು ಹೋಗುತ್ತವೆ. ಅಪೂರ್ಣ ಕೆಲಸ ಮತ್ತು ಬ್ಯಾರಿಕೇಡ್‌ಗಳು ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಹೆಚ್ಚಿಸಿದೆ.

ಡೀಸೆಲ್ ಬೆಲೆ ಏರಿಕೆ: ವ್ಯಾಪಾರಸ್ಥರ ಬೇಸರ, ಹಣ್ಣು-ತರಕಾರಿ ಸೇರಿ ಹಲವು ಅಗತ್ಯ ವಸ್ತುಗಳ ದರ ಏರಿಕೆ?
ಬೆಲೆ ಏರಿಕೆಯಿಂದ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿದ್ದು, ಆರ್ಥಿಕ ಒತ್ತಡ ಹೆಚ್ಚಾಗಿದೆ. ಇದೀಗ ಡೀಸೆಲ್ ದರ ಹೆಚ್ಚಳ ದೊಡ್ಡ ಹೊಡೆತ ನೀಡಲಿದೆ.

ಗಾಂಧಿ ಬಜಾರ್ ಮಾರುಕಟ್ಟೆ ಮರು ವಿನ್ಯಾಸದಿಂದ ಮಾರಾಟಗಾರರು, ಗ್ರಾಹಕರಿಗೆ ಅನುಕೂಲವಾಗಲಿದೆ: ಹೈಕೋರ್ಟ್
ಯೋಜನೆಯ ಅನುಷ್ಠಾನ 2022ರ ಡಿಸೆಂಬರ್‌ನಲ್ಲೇ ಆರಂಭವಾಗಿದೆ. ಈಗಾಗಲೇ ಶೇ 95ರಷ್ಟು ಪೂರ್ಣಗೊಂಡಿದೆ. ಇದಕ್ಕಾಗಿ 24.88 ಕೋಟಿ ರೂ. ವ್ಯಯಿಸಲಾಗಿದೆ.

ಗಾಂಧಿ ಬಜಾರ್‌ನಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ: ಅಂಗಡಿ ಕಳೆದುಕೊಳ್ಳುವ ಭಯ, ಪಾಲಿಕೆ ಅಧಿಕಾರಿಗಳೊಂದಿಗೆ ವ್ಯಾಪಾರಿಗಳ ಸಂಘರ್ಷ
ಮಲ್ಟಿಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಗಾಂಧಿ ಬಜಾರ್‌ನಲ್ಲಿರುವ ಹಳೆಯ ಅಂಗಡಿಗಳನ್ನು ನೆಲಸಮಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ
ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಬನ್ನಿ, ಇಲ್ಲಿನ ಅವ್ಯವಸ್ಥೆಗಳ ನೀವೇ ನೋಡಿ: ಸಿಎಂ ಬೊಮ್ಮಯಿಗೆ ವ್ಯಾಪಾರಸ್ಥರ ಆಗ್ರಹ
ಅವೆನ್ಯೂ ರಸ್ತೆ, ಚಿಕ್ಕಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಮಗಾರಿ ವಿಳಂಬ ಹಾಗೂ ನಿರಂತರ ಅಗೆಯುವಿಕೆಯಿಂದ ಬೇಸತ್ತು ಹೋಗಿರುವ ಅಲ್ಲಿನ ವ್ಯಾಪಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಅವ್ಯವಸ್ಥೆಗಳನ್ನು ನೋಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನೋಟು ನಿಷೇಧ: ಮೋದಿ ನಿರ್ಧಾರಕ್ಕೆ ವ್ಯಾಪಾರಸ್ಥರ ಬೆಂಬಲ, ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ
ದುಬಾರಿ ನೋಟಿನ ಮೇಲೆ ನಿಷೇಧ ಹೇರಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡದೆ ದೆಹಲಿ ವ್ಯಾಪಾರಸ್ಥರು ಬೆಂಬಲವನ್ನು ವ್ಯಕ್ತಪಡಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ...

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ: ಮಾರಾಟಗಾರರ ಅಸಮಾಧಾನ
ನಗರದಲ್ಲೆಡೆ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಮಾರಾಟಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ನಿಷೇಧಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ...

ಕೆ.ಆರ್.ಮಾರ್ಕೆಟ್ ಬಂದ್: ವ್ಯಾಪಾರ-ವಹಿವಾಟು ಸ್ಥಗಿತ, ಗ್ರಾಹಕರ ಪರದಾಟ
ಸಿಲಿಕಾನ್ ಸಿಟಿಯ ಕೇಂದ್ರ ಭಾಗವಾಗಿರುವ ಕೃಷ್ಣ ರಾಜೇಂದ್ರ ಮಾರ್ಕೆಟ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ಆಗ್ರಹಿಸಿ ಸ್ಥಳೀಯ ಸಂಘಟನೆಗಳು ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿವೆ...

