ವೋಟರ್ ಐಡಿ ಹಗರಣ

ಮತದಾರರ ದತ್ತಾಂಶ ತಿರುಚಿದ ಪ್ರಕರಣ: ತಡೆಯಾಜ್ಞೆ ತಂದ ಅಧಿಕಾರಿಗಳು; ತನಿಖೆಗೆ ಹಿನ್ನಡೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾರರ ಮಾಹಿತಿಗಳು,ದತ್ತಾಂಶಗಳನ್ನು ತಿರುಚಿದ ಪ್ರಕರಣದಲ್ಲಿ ಸರ್ಕಾರೇತರ ಸಂಸ್ಥೆ ಚಿಲುಮೆ ಮತ್ತು ಬಿಬಿಎಂಪಿ ಕಂದಾಯ ಅಧಿಕಾರಿಗಳು ಭಾಗಿಯಾಗಿರುವ ಪ್ರಕರಣದ ತನಿಖೆಗೆ ಹಿನ್ನಡೆಯುಂಟಾಗಿದೆ. ನೋಟಿಸ್ ಪಡೆದ ಕೆಲವು ಆರೋಪಿ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ತನಿಖೆಗೆ ತಡೆಯಾಜ್ಞೆ ತಂದಿದ್ದಾರೆ.

ವೋಟರ್ ಐಡಿ ಹಗರಣ: ಬಿಬಿಎಂಪಿ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಅಮಾನತು ರದ್ದುಗೊಳಿಸಿ ವರ್ಗಾವಣೆ
ಶಿವಾಜಿನಗರ, ಮಹದೇವಪುರ ವಲಯ ಹಾಗೂ ಚಿಕ್ಕಪೇಟೆಯಲ್ಲಿ ಮತದಾರರ ದತ್ತಾಂಶ ತಿದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ (ಆಡಳಿತ) ಎಸ್. ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಅವರನ್ನು ವರ್ಗಾವಣೆ ಮಾಡಲಾಗಿದೆ.

'ಕುಕ್ಕರ್ ಬಾಂಬ್ ಬ್ಲಾಸ್ಟ್ ಏನು ಮುಂಬೈ ದಾಳಿ, ಪುಲ್ವಾಮಾ ರೀತಿಯ ಘಟನೆಯಾ'?: ಬಿಜೆಪಿ ಟೀಕಿಸೋ ಭರದಲ್ಲಿ ಡಿಕೆಶಿ ಹೇಳಿದ್ದೇನು?
ಆಡಳಿತಾರೂಢ ಬಿಜೆಪಿ ಪಕ್ಷವನ್ನು ಟೀಕಿಸುವ ಭರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, 'ಕುಕ್ಕರ್ ಬಾಂಬ್ ಬ್ಲಾಸ್ಟ್ ಏನು ಮುಂಬೈ ದಾಳಿ, ಪುಲ್ವಾಮಾ ರೀತಿಯ ಘಟನೆಯಾ'? ಎಂದು ಪ್ರಶ್ನಿಸಿದ್ದಾರೆ.

ನೋಟಿಸ್ ಜಾರಿ ಬಳಿಕ ಪೊಲೀಸರ ಮುಂದೆ ಹಾಜರಾದ ಅಮಾನತುಗೊಂಡಿರುವ ಇಬ್ಬರು ಬಿಬಿಎಂಪಿ ಅಧಿಕಾರಿಗಳು
ಮತದಾರರ ಮಾಹಿತಿ ಕಳ್ಳತನ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಇಬ್ಬರು ಹಿರಿಯ ಅಧಿಕಾರಿಗಳು ನೋಟಿಸ್ ಜಾರಿಯಾದ ನಂತರ ಹಲಸೂರು ಪೊಲೀಸರ ಮುಂದೆ ಹಾಜರಾಗಿದ್ದಾರೆ.

ವೋಟರ್ ಐಡಿ ಹಗರಣ: ನಕಲಿ ಐಡಿ ಪಡೆಯಲು ಎನ್‌ಜಿಒಗೆ ಸಹಾಯ ಮಾಡಿದ್ದ ನಾಲ್ವರು ಆರ್‌ಒಗಳ ಬಂಧನ
ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಎನ್‌ಜಿಒ ಚಿಲುಮೆ ಟ್ರಸ್ಟ್‌ನ ಪ್ರತಿನಿಧಿಗಳಿಗೆ ನಕಲಿ ಗುರುತಿನ ಚೀಟಿ ನೀಡಿದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ವೋಟರ್ ಐಡಿ ಹಗರಣ ಆರೋಪ ಬಗ್ಗೆ ಮುಕ್ತ ತನಿಖೆ: ಸಿಎಂ ಬೊಮ್ಮಾಯಿ
ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಹಗರಣ ಆರೋಪ ಬಗ್ಗೆ ಸರ್ಕಾರ ಮುಕ್ತವಾದ ತನಿಖೆ ಮಾಡಿಸುತ್ತದೆ. ಯಾವುದಾದರೂ ಸಂಸ್ಥೆ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಆರೋಪ ಬಂದರೆ ತನಿಖೆ ಮಾಡಬೇಕೆಂದೇ ನಾವು ಆದೇಶ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿಲುಮೆ ಹಗರಣ: ಬಿಬಿಎಂಪಿ ಅಧಿಕಾರಿಗಳ ಅಮಾನತು, 3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇಸಿಐ ಸೂಚನೆ
ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ.

ವೋಟರ್ ಐಡಿ ಹಗರಣ: ನಾಪತ್ತೆಯಾಗಿದ್ದ ಚಿಲುಮೆ ಆಡಳಿತಾಧಿಕಾರಿ ಲೋಕೇಶ್ ಬಂಧನ
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ವೋಟರ್ ಐಡಿ ಹಗರಣ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಂ.ಲೋಕೇಶ್ ಅವರನ್ನು ಮಂಗಳವಾರ ಹಲಸೂರು...

ವೋಟರ್ ಐಡಿ ಅಕ್ರಮ: ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಬಿಬಿಎಂಪಿ, ಇಲಾಖಾ ತನಿಖೆಗೆ ಆದೇಶ
ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಎಡಿಇಒ) ಸಲ್ಲಿಸಿರುವ ತನಿಖಾ ವರದಿಯ ಮೇರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಮೂವರು ಹೆಚ್ಚುವರಿ ಕಂದಾಯ ಅಧಿಕಾರಿಗಳನ್ನು (ಎಆರ್‌ಒ) ಅಮಾನತುಗೊಳಿಸಿದ್ದಾರೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

