ವಿಶೇಷಕೊಡವ ಹಾಕಿ ನಮ್ಮೆ: ಕಾಫಿ ನಾಡಿನಲ್ಲಿ ಮರುಕಳಿಸಿದ ವೈಭವ!
ಕಾಫಿ ನಾಡು ಕೊಡಗು ಹಾಕಿ ಕ್ರೀಡೆಗೂ ಹೆಸರುವಾಸಿ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಭಾನ್ವಿತ ಹಾಕಿ ಪಟುಗಳನ್ನು ನೀಡಿದ ಹೆಗ್ಗಳಿಕೆ ಈ ಪುಟ್ಟ ಜಿಲ್ಲೆಗೆ ಇದೆ. ಜಿಲ್ಲೆಯ ಹಾಕಿ ರಂಗಕ್ಕೆ ಕಳಶವಿಟ್ಟಂತೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರತಿ ವರ್ಷ ನಡೆಯುತ್ತದೆ.