ರಾಜ್ಯವೈದ್ಯರ ಅಮಾನತು ಹಿಂಪಡೆಯಿರಿ: ಗರ್ಭಿಣಿ-ಅವಳಿ ಶಿಶುಗಳ ಸಾವಿನ ಪ್ರಕರಣ ಸಂಬಂಧ ವೈದ್ಯಾಧಿಕಾರಿಗಳ ಸಂಘ ಒತ್ತಾಯ
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿದ್ದ ಕರ್ತವ್ಯ ನಿರತ ವೈದ್ಯೆ ಡಾ.ಉಷಾ ಎ.ಆರ್ ಅವರ ಬೆಂಬಲಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿಂತಿದೆ. ಸಂಘದ ನಿಯೋಗ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಅಮಾನತು ಹ