ದೇಶಜಿಲ್ಲಾ ಕೇಂದ್ರಗಳಲ್ಲಿ ಆಸ್ಪತ್ರೆಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಪಿಎಂ ಕೇರ್ಸ್ ಫಂಡ್ ನಿಂದ 551 ಘಟಕ ಸ್ಥಾಪನೆ
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಳ ಲಭ್ಯತೆ ಸರಾಗವಾಗಲು ಪ್ರಧಾನ ಮಂತ್ರಿಗಳ ನಿರ್ದೇಶನದ ಪ್ರಕಾರ, 551 ಮೀಸಲು ಪಿಎಸ್ಎ(ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸಾರ್ವಜನಿಕ ಆರೋಗ್ಯ ಸೌಕರ್ಯದೊಳಗೆ ಸ್ಥಾಪಿಸಲು ಅನುದಾನ ನೀಡಲು ಪಿಎಂ ಕೇರ್ಸ್ ಫಂಡ್ ನಿಂದ ತಾತ್ವಿಕ ಅನುಮೋದನೆ ನೀಡಲಾಗಿದೆ.