ದೇಶಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೈಎಸ್ಆರ್ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಬಂಧನ
ತೆಲಂಗಾಣ ಸರ್ಕಾರದ ಆಪಾದಿತ ಕಾಳೇಶ್ವರಂ ಏತ ನೀರಾವರಿ ಯೋಜನೆ ಹಗರಣದ ವಿರುದ್ಧ ಪ್ರತಿಭಟನೆ ನಡೆಸಲು ವೈಎಸ್ಆರ್ ತೆಲಂಗಾಣ ಪಕ್ಷದ (ವೈಎಸ್ಆರ್ಟಿಪಿ) ಮುಖ್ಯಸ್ಥೆ ವೈಎಸ್ ಶರ್ಮಿಳಾ ಮತ್ತು ಅವರ ಕಾರ್ಯಕರ್ತರು ಸಂಸತ್ತಿನತ್ತ ಮೆರವಣಿಗೆ ಆರಂಭಿಸಿದ ನಂತರ ದೆಹಲಿ ಪೊಲೀಸರು ಮಂಗಳವಾರ ಅವರನ್ನು ಬಂಧಿಸಿದ್ದಾರೆ.