ವೈ ಕೆಟಗರಿ ಭದ್ರತೆ

ನಿಷೇಧಿತ ಪಿಎಫ್ಐ ಸಂಘಟನೆಯಿಂದ ಬೆದರಿಕೆ: ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ರಾಮಾನುಜ ಜೀಯರ್ ಸ್ವಾಮೀಜಿಗೆ ವೈ ಕೆಟಗರಿ ಭದ್ರತೆ
ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ: ಅಖಿಲೇಶ್ ಮಿತ್ರ ರಾಜ್ ಭರ್ ಗೆ 'ವೈ' ಕೆಟಗರಿ ಭದ್ರತೆ ನೀಡಿದ ಯೋಗಿ ಆದಿತ್ಯನಾಥ್
ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್ ಭರ್ ಗೆ ಉತ್ತರ ಪ್ರದೇಶ ಸರ್ಕಾರ 'ವೈ' ಕೆಟಗರಿಯ ಭದ್ರತೆ ನೀಡಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಕೆಟಗರಿಯ ಭದ್ರತೆಯಡಿ ಇಬ್ಬರು ಆಪ್ತ ಭದ್ರತಾ ಅಧಿಕಾರಿಗಳು ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ.

ಸೆರಂ ಇನ್ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾಗೆ ಸಿಆರ್ ಪಿಎಫ್ ನಿಂದ 'ವೈ' ಕೆಟಗರಿ ಭದ್ರತೆ
"ಸಂಭಾವ್ಯ ಬೆದರಿಕೆ" ಎದುರಿಸುತ್ತಿರುವ ಉದ್ಯಮಿ, ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರಿಗೆ ಸಿಆರ್‌ಪಿಎಫ್ ಭಾರತದಾದ್ಯಂತ 'ವೈ' ಕೆಟಗರಿ ಭದ್ರತೆ ನೀಡಿದೆ ಕೇಂದ್ರ ಸರ್ಕಾರದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನೀತಾ ಆಂಬಾನಿಗೆ "ವಿವಿಐಪಿ ಭದ್ರತೆ" ಒದಗಿಸಿದ ಕೇಂದ್ರ ಸರ್ಕಾರ
ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗೆ ಜೆಡ್ ಕೆಟಗರಿ ಭದ್ರತೆ ಒದಗಿಸಿದ ವಿಚಾರ ಹಸಿರಾಗಿರುವಂತೆಯೇ ಅವರ ಪತ್ನಿ ನೀತಾ ಅಂಬಾನಿ ಅವರಿಗೂ ಕೂಡ ಕೇಂದ್ರ ಸರ್ಕಾರ ವಿವಿಐಪಿ ಭದ್ರತೆ ಒದಗಿಸಿದೆ.

