ಕ್ರಿಕೆಟ್ವೇತನ ಸಮಾನತೆ: ಪುರುಷರಷ್ಟೇ ಮಹಿಳಾ ಕ್ರಿಕೆಟಿಗರಿಗೂ ಸಮಾನ ಪಂದ್ಯ ಶುಲ್ಕ- ಬಿಸಿಸಿಐ ಘೋಷಣೆ
ಕ್ರಾಂತಿಕಾರಕ ನಿರ್ಧಾರವೊಂದರಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಗುರುವಾರ ತನ್ನ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಪಂದ್ಯ ಶುಲ್ಕವನ್ನು ಘೋಷಿಸಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.