ವೃಷಭಾವತಿ ನದಿ

ವೃಷಭಾವತಿ ನದಿ ಪುನಶ್ಚೇತನಕ್ಕೆ ಸಮಗ್ರ ಯೋಜನೆ ರೂಪಿಸಿ: ಅಧಿಕಾರಿಗಳಿಗೆ BBMP ಸೂಚನೆ
ಜಲಮಂಡಳಿಯಿಂದ ಎಷ್ಟು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಎಸ್ಟಿಪಿಗಳ ನಿರ್ಮಾಣ ಸಂಬಂಧ ಯಾವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಬೇಕು.

ಮಳೆಯ ಅಬ್ಬರಕ್ಕೆ ನಲುಗಿದ ಬೆಂಗಳೂರು: ಐಡಿಯಲ್ ಹೋಮ್ಸ್ ಬಡಾವಣೆಗೆ ನುಗ್ಗಿದ ವೃಷಭಾವತಿ ನೀರು, ಜನತೆಯ ಪರದಾಟ
ಈ ವರ್ಷ ಕಂಡ 2ನೆಯ ದಾಖಲೆಯ ಮಳೆಯ ಆಘಾತಕ್ಕೆ ನಗರದ ಜನತೆ ತತ್ತರಿಸಿದ್ದಾರೆ. ಸುಮಾರು 3 ತಾಸು ಸುರಿದ ಭಾರೀ ಮಳೆಯು ಪ್ರವಾಹ ಸದೃಶ್ಯ ವಾತಾವರಣ ನಿರ್ಮಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಏಕಾಏಕಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ವೃಷಭಾವತಿ ನದಿ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಅನುಷ್ಠಾನ: ಸಿ.ಪಿ.ಯೋಗೇಶ್ವರ್
ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಿಸಿ ಕೃಷಿ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಬೆಂಗಳೂರು: ವೃಷಭಾವತಿ ನದಿಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದ ಟ್ರಕ್ ವಶಕ್ಕೆ ಪಡೆದ ನಾಗರೀಕರು!
ವೃಷಭಾವತಿ ನದಿಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದಿದ್ದ ಟ್ರಕ್ ಚಾಲಕನನ್ನು ಸ್ಥಳೀಯರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.

ಅನಂತಕುಮಾರ್ ಆಶಯದಂತೆ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಕ್ರಮ: ಸಿ ಸಿ ಪಾಟೀಲ್
ದಿವಂಗತ ಅನಂತಕುಮಾರ್ ಅವರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ನಿತ್ಯ ಹರಿಯುತ್ತಿರುವ ವೃಷಭಾವತಿನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಮತ್ತು ಗಣಿ ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಗಾಳಿ ಆಂಜನೇಯ ಸ್ವಾಮಿ ಮಹಿಮೆ ಗೊತ್ತಾ?
ಬೆಂಗಳೂರು ಮಹಾನಗರದ ಮೈಸೂರು ರಸ್ತೆ ಬಾಪೂಜಿ ನಗರದಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ...

