ವೃದ್ಧೆ

ಶಿರಸಿ: ಮಳೆಯಿಂದಾಗಿ ರಸ್ತೆಗಳು ದುಸ್ತರ; ಜಾರಿಬಿದ್ದು ಕಾಲು ಮುರಿದುಕೊಂಡ ವೃದ್ಧೆ, ಬಿದಿರಿನ ಬುಟ್ಟಿಯಲ್ಲಿ ಹೊತ್ತೊಯ್ದ ಗ್ರಾಮಸ್ಥರು!
ಭಾರೀ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗಿ ಜಾರುವಂತಾಗಿತ್ತು, ಮಹಾದೇವಿಯನ್ನು ಸ್ಥಳೀಯರು ಮಾಡಿದ ಬಿದಿರಿನ ಬುಟ್ಟಿಯಲ್ಲಿ 5 ಕಿ.ಮೀ. ಹೊತ್ತುಕೊಂಡು ಹೋಗಿ ಅಂತಿಮವಾಗಿ ಸಿರಗುಣಿ ಗ್ರಾಮದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಶಿರಸಿಯಲ್ಲಿರುವ ಆಸ್ಪತ್ರೆಗೆ ತಲುಪಬೇಕಾಯಿತು.

ಕೊಪ್ಪಳ: ಸತತ ಮಳೆಗೆ ಮನೆ ಕುಸಿದು ವೃದ್ಧೆ, ನವಜಾತ ಶಿಶು ಸಾವು
ಜಿಲ್ಲೆಯ ಕನಕಗಿರಿಯ ಜೀರಾಳ ಎಂಬ ಗ್ರಾಮದಲ್ಲಿ ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಹಾಗೂ 20 ದಿನದ ನವಜಾತ ಶಿಶು ಮೃತಪಟ್ಟಿದೆ.

ಮೈಸೂರು: ಕೋವಿಡ್ ಸೋಂಕಿತರಿಗೆ ನೆರವಾಗಲು ಪಿಂಚಣಿ ಹಣ ದಾನ ಮಾಡಿದ 70 ವರ್ಷದ ವೃದ್ಧೆ!
ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಹಿರೇನಹಳ್ಳಿ ನಿವಾಸಿಯಾಗಿರುವ 70 ವರ್ಷದ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಾಮರಾಜನಗರ: ಮೊಮ್ಮಕ್ಕಳಿಗೆ ಕೊರೋನಾ ಸೋಂಕು ಹರಡುವ ಭೀತಿಗೆ ಹೆದರಿ ವೃದ್ಧೆ ನೇಣಿಗೆ ಶರಣು
ತನಗೆ ಬಂದ ಕೊರೋನಾ ಸೋಂಕು ಮೊಮ್ಮಕ್ಕಳಿಗೂ ಹರಡಬಹುದು ಎಂದು ಹೆದರಿದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿದೆ.

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದ 105 ವರ್ಷದ ವೃದ್ಧೆ!
ಕೊರೋನಾ ಹಾಟ್'ಸ್ಪಾಟ್ ಎಂದೇ ಹೇಳಲಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು, ಸೋಂಕು ತಗುಲಿದ್ದರೂ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕಾಲುವೆಯಲ್ಲಿ ಕೊಚ್ಚಿ ಹೋಗುತಿದ್ದ ವೃದ್ದೆಯನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದಯುವಕ
ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಯಲ್ಲಿ ಕೊಚ್ಚಿ ಹೋಗುತಿದ್ದ ವೃದ್ದೆಯನ್ನ ಪ್ರಾಣದ ಹಂಗು ತೊರೆದು ಯುವಕನೊಬ್ಬ ರಕ್ಷಿಸಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಆರ್.ಟಿ.ಓ.ಕಛೇರಿಯ ಮುಂದೆ ನಡೆದಿದೆ.

ರಾಮನಗರ: ಮಲಗಿದ್ದ ವೃದ್ಧೆ ಚಿರತೆಗೆ ಬಲಿ
ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ಮೆರೆದಿದೆ. ಮನೆಯ ಹೊರಗಡೆ ಮಲಗಿದ್ದ ವೃದ್ಧೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೆಂಗಳೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ವೃದ್ಧೆ, ಪದವಿ ವಿದ್ಯಾರ್ಥಿ ದುರ್ಮರಣ
ಆರೋಗ್ಯ ತಪಾಸಣೆಗೆಂದು ಹಾಸನದಿಂದ ಬಂದಿದ್ದ ವೃದ್ದೆಯೊಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಗೆ ಓಲಾ ಕ್ಯಾಬ್ ಡಿಕ್ಕಿ ಹೊಡೆದಿದ್ದು, ವೃದ್ಧೆ ಸ್ಥಳದಲ್ಲೇ...

ತನ್ನ ಮನೆಯ ಶೌಚಾಲಯ ತಾನೇ ನಿರ್ಮಿಸಿಕೊಳ್ಳುತ್ತಿರುವ ಕಾಶ್ಮೀರದ ಈ ವೃದ್ಧೆ!
ಜಮ್ಮು-ಕಾಶ್ಮೀರದ 87 ವರ್ಷದ ವೃದ್ಧೆ ತನ್ನ ಮನೆಯ ಶೌಚಾಲಯವನ್ನು ತಾನೇ ನಿರ್ಮಿಸಿಕೊಳ್ಳುವ ಮೂಲಕ ತನ್ನ ಗ್ರಾಮವನ್ನು ಬಯಲುಶೌಚ ಮುಕ್ತವನ್ನಾಗಿಸಲು ಕೊಡುಗೆ ನೀಡಿದ್ದಾರೆ.

