ರಾಜ್ಯಕೊಪ್ಪಳ: ಜಿ.ಪಂ.ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯ ಸದಸ್ಯರಿಂದಲೇ ಗಂಭೀರ ದೂರು
ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ಸ್ವಪಕ್ಷೀಯ ಕಾಂಗ್ರೆಸ್ಸಿನ 16 ಜನ ಜಿಲ್ಲಾ ಪಂಚಾಯಿತಿ ಸದಸ್ಯರು ಸಿಇಒ ರಘುನಂದನ್ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದು, ಶಾಸನ ಬದ್ಧ ಅನುದಾನ ದುರುಪಯೋಗದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.