ವಿಶ್ವದಾದ್ಯಂತ ಬಾಕ್ಸ್ ಆಫೀಸ್

Devara: ಬಿಡುಗಡೆಯಾದ 2ನೇ ದಿನದಲ್ಲೇ ವಿಶ್ವದಾದ್ಯಂತ 243 ಕೋಟಿ ರೂ. ಗಳಿಕೆ!
ನಿರ್ಮಾಪಕರು ಭಾನುವಾರ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಶುಕ್ರವಾರ ಬಿಡುಗಡೆಯಾದ Devara ಭಾಗ-1 ಮೊದಲ ದಿನವೇ ರೂ. 172 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 140 ಕೋಟಿ ರೂ. ಬಾಚಿದ 'ಅದಿಪುರುಷ'
ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ' ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ರೂ. 140 ಕೋಟಿ ಕಲೆಕ್ಷನ್ ಮಾಡಿದೆ. ಓಂ ರಾವತ್ ನಿರ್ದೇಶನದ ರಾಮಾಯಣ ಕೃತಿ ಆಧಾರಿತ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೊದಲ ದಿನವೇ ಅತಿ ಹೆಚ್ಚು ಹಣ ಗಳಿಸಿದ ಮೊದಲ ಹಿಂದಿ ಚಿತ್ರವಾಗಿದೆ ಎಂದು ನಿರ್ಮಾಣ ಸಂಸ್ಥೆ ಟಿ- ಸಿರೀಸ್ ಶನಿವಾರ ತಿಳಿಸಿದೆ.

ವಿಶ್ವ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ. ದಾಟಿದ 'ತೂ ಝೂಟಿ ಮೈನ್ ಮಕ್ಕರ್'
ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ 'ತು ಝೂಟಿ ಮೈನ್ ಮಕ್ಕರ್' ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 200 ಕೋಟಿ ರೂ. ದಾಟಿದೆ ಎಂದು ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ.

ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 'ಪಠಾಣ್' 900 ಕೋಟಿ ರೂ. ಕಲೆಕ್ಷನ್!
ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ರೂ. 901 ಕೋಟಿ ಕಲೆಕ್ಷನ್ ಮಾಡಿದೆ.

