ವಿಶೇಷರಕ್ತದಾನಿಯ ಶತಕದ ಕನಸು,ಜೀವ ಉಳಿಸುವ ಮನಸು: 63ನೇ ಬಾರಿ ರಕ್ತದಾನ ಮಾಡಿ ಮಾದರಿಯಾದ ಲಕ್ಷ್ಮೀಕಾಂತ್!
ಇಂದು ವಿಶ್ವ ರಕ್ತದಾನಿಗಳ ದಿನ. ಕೊಪ್ಪಳ ಜಿಲ್ಲೆಯಲ್ಲಿ ಈ ದಿನದ ಸ್ಪೆಷಲ್ ಸೆಲೆಬ್ರಿಟಿ ಎಂದರೆ ಲಕ್ಷ್ಮಿಕಾಂತ್ ಗುಡಿ. ಜೀವ ಉಳಿಸುವ ತುಡಿತದಲ್ಲಿರುವ ಅವರು ಸದಾ ಸೆಲೆಬ್ರಿಟಿಯೇ. ಈ ದಿನ ಬಂತೆಂದರೆ ಸಾಕು,ಎಲ್ಲರ ಕಣ್ಮುಂದೆ ಅವರ ಚಿತ್ರ ಕಾಣುತ್ತದೆ. ಹಲವು ಬಾರಿ ಅವರು ರಕ್ತದಾನ ಮಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.