ಕ್ರೀಡೆವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಭಾರತದ ಶರದ್ ಕುಮಾರ್ ಗೆ ಬೆಳ್ಳಿ, ವರುಣ್ ಭಾಟಿಗೆ ಕಂಚು
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾನುವಾರ ಭಾರತದ ಪದಕ ಪಟ್ಟಿಗೆ ಎರಡು ಪದಕಗಳು ಸೇರ್ಪಡೆಯಾಗಿದ್ದು, ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತದ ಶರದ್ ಕುಮಾರ್ ಬೆಳ್ಳಿ ಮತ್ತು ವರುಣ್ ಸಿಂಗ್ ಭಾಟಿ ಕಂಚು ಪಡೆದಿದ್ದಾರೆ.