ವಿಶೇಷಗಲಭೆಯಲ್ಲಿ ಸುಟ್ಟುಹೋದ ತನ್ನ ಯೋಧನನ ಮನೆ ಮರುನಿರ್ಮಾಣ ಮಾಡಿ 'ವಿವಾಹ ಉಡುಗೊರೆ' ಕೊಡಲಿರುವ ಬಿಎಸ್ಎಫ್!
ಈಶಾನ್ಯ ದೆಹಲಿಯಲ್ಲಿನ ಗಲಭೆಯಲ್ಲಿ ಭಸ್ಮವಾಗಿದ್ದ ಗಡಿ ಭದ್ರತಾ ಪಡೆ ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್ ಅವರ ಮನೆಯನ್ನು ಬಿಎಸ್ಎಫ್ ಪುನರ್ನಿರ್ಮಿಸಿ ಕೊಟ್ಟಿದ್ದು ಇದನ್ನು ಆತನ "ವಿವಾಹದ ಉಡುಗೊರೆ" ಎಂದು ಹೇಳಿದೆ. ಈ ಮೂಲಕ ಯೋಧರು, ಸೇನೆಯಲ್ಲಿನ ಸೌಹಾರ್ದತೆಯನ್ನು ಇನ್ನೊಮ್ಮೆ ಸಾಬೀತು ಮಾಡಿದೆ.