ದೇಶವಿರಾರ್ ಆಸ್ಪತ್ರೆಯ ಬೆಂಕಿ ದುರಂತ ರಾಷ್ಟ್ರ ಮಟ್ಟದ ಸುದ್ದಿಯಲ್ಲ, ರಾಜ್ಯ ಸರ್ಕಾರವೇ ಹಣಕಾಸು ನೆರವು ನೀಡುತ್ತದೆ: ಮಹಾರಾಷ್ಟ್ರ ಆರೋಗ್ಯ ಸಚಿವ
ಮಹಾರಾಷ್ಟ್ರ ರಾಜ್ಯದ ಪಲ್ಘಾರ್ ಜಿಲ್ಲೆಯ ವಿರಾರ್ ವಿಜಯ ವಲ್ಲಭ ಕೋವಿಡ್-19 ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿ 13 ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಹಲವರು ಅಗಲಿದ ಜೀವಗಳಿಗೆ ಕಂಬನಿ ಮಿಡಿದಿದ್ದಾರೆ.