ರಾಜಕೀಯ'ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ': ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿ ತಿರುಗೇಟು!
ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡುತ್ತಿದೆ. ಶನಿವಾರ ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ ಎಂದು ಪ್ರಕಟಣೆ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿತ್ತು. ಅಲ್ಲದೇ, ವಿಪಕ್ಷ ನಾಯಕನಾಗಲು ಬೇಕಾದ ಅರ್ಹತೆಗಳನ್ನು ಸಹ ಟ್ವೀಟ್ ನಲ್ಲಿ ಹೇಳಿತ್ತು.