ದೇಶಕೇಜ್ರಿವಾಲ್ ಗೆ ತೀವ್ರ ಮುಖಭಂಗ: 3 ರಾಜ್ಯಗಳಲ್ಲಿ ಎಎಪಿಯ 215 ಅಭ್ಯರ್ಥಿಗಳಿಗೆ ಸಿಕ್ಕಿದ್ದು ನೋಟಾಗಿಂತ ಕಡಿಮೆ ಮತ!
ದೆಹಲಿ ಮತ್ತು ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಗೋವಾ, ಗುಜರಾತ್ನಂತೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಖಾತೆ ತೆರೆಯುವ ಉದ್ದೇಶ ಈಡೇರಿಲ್ಲ. ಈ ಮೂರು ರಾಜ್ಯಗಳಲ್ಲಿ ಎಎಪಿ ಅಭ್ಯರ್ಥಿಗಳು ಸೋತಿದ್ದು ಹೆಚ್ಚಿನ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ.