ರಾಜ್ಯತೀವ್ರ ಬಿಸಿಲು, ಗ್ಯಾಸ್ ಟ್ರಬಲ್: ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಏರಿಕೆ
ಏಪ್ರಿಲ್ 1ರಿಂದ 26ರವರೆಗೆ ಕರ್ನಾಟಕದಲ್ಲಿ 9,101 ಮಿಲಿಯನ್ ಯುನಿಟ್ಗಳ (MU) ವಿದ್ಯುತ್ ಬಳಕೆ ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಹಾಗೂ 2025ರ ಇದೇ ಅವಧಿಗಿಂತ ಸುಮಾರು 20% ಹೆಚ್ಚು. ಕಳೆದ ಕೆಲವು ವರ್ಷಗಳಲ್ಲಿ ಈ ಅವಧಿಯ ಬಳಕೆ 7,500ರಿಂದ 8,000 MUಗಳ ನಡುವೆ ಇತ್ತು.