ವಿದ್ಯುತ್ ದರ

ರಾಜ್ಯದ ಜನತೆಗೆ 'ವಿದ್ಯುತ್' ಶಾಕ್: ಇಂದಿನಿಂದ ದರ ಏರಿಕೆ..!
2024-25ರ ವಿದ್ಯುತ್ ಬಳಕೆ, ಎಸ್ಕಾಂಗಳ ಆರ್ಥಿಕ ಸ್ಥಿತಿ, ಇಂಧನ ಹೊಂದಾಣಿಕೆ ಶುಲ್ಕ, ಕಲ್ಲಿದ್ದಲು ಸಂಗ್ರಹ, ವಿದ್ಯುತ್ ಜಾಲದ ಸ್ಥಿತಿ, ಪ್ರಸರಣ ನಷ್ಟ ಹಾಗೂ ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ಈ ಶುಲ್ಕ ನಿಗದಿಯಾಗಲಿದೆ.

ವಿದ್ಯುತ್ ಗ್ರಾಹಕರಿಗೆ ಮತ್ತೆ ಸರ್ಕಾರ ಶಾಕ್: ದರ ಏರಿಕೆ ಮಾಡಿದ KERC; ಯಾರಿಗೆ ಅನ್ವಯ? ಇಲ್ಲಿದೆ ಮಾಹಿತಿ!
ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ.

ವಿದ್ಯುತ್ ದರ ಏರಿಕೆ: KERC ಗೆ ಪ್ರಸ್ತಾವನೆ ಸಲ್ಲಿಸಿದ ವಿದ್ಯುತ್ ವಿತರಣಾ ಕಂಪನಿಗಳು
ಕೆಇಆರ್ ಸಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಬೆಲೆ ಏರಿಕೆಯ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಇದು ಮಾಮೂಲಿ ಪ್ರಕ್ರಿಯೆ ಎಂದು ಹೇಳಿದ್ದಾರೆ.

2025 ಏಪ್ರಿಲ್ ನಿಂದ ದೇಶಾದ್ಯಂತ ಪೀಕ್ ಅವರ್ ನಲ್ಲಿ ವಿದ್ಯುತ್ ಬೆಲೆ ಶೇ.20ರಷ್ಟು ಹೆಚ್ಚಳ
ದೇಶಾದ್ಯಂತ ವಿದ್ಯುತ್ ಬಳಕೆ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ವಿದ್ಯುಚ್ಛಕ್ತಿ (ಗ್ರಾಹಕರ ಹಕ್ಕುಗಳು) ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಪ್ರಕಾರ, ಏಪ್ರಿಲ್ 1, 2025ರಿಂದ ಪೀಕ್ ಅವರ್ ಗಳಲ್ಲಿ(peak hour) ವಿದ್ಯುತ್ ಬಳಕೆಯ ಶೇಕಡಾ 10ರಿಂದ ಹೆಚ್ಚು ಪಾವತಿಸಬೇಕಾಗುತ್ತದೆ.

ವಿದ್ಯುತ್ ದರ ಏರಿಕೆ ಹಿಂಪಡೆಯಲು ಸಾಧ್ಯವಿಲ್ಲ: ಸಚಿವ ಕೆಜೆ ಜಾರ್ಜ್
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಅನುಮೋದಿಸಿರುವ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ವಿದ್ಯುತ್ ದರ ಏರಿಸಿ 440 ವೋಲ್ಟೇಜ್ ಶಾಕ್ ನೀಡಿದೆ ಹೆಸ್ಕಾಂ: ವಾಣಿಜ್ಯೋದ್ಯಮಿಗಳ ಕಿಡಿ
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೆ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಸ್ಥೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಜನತೆಗೆ 'ವಿದ್ಯುತ್ ಬರೆ' ಹಾಕಲು ರಾಜ್ಯ ಸರ್ಕಾರ ಸಜ್ಜು: ಜೆಡಿಎಸ್ ಆಕ್ರೋಶ
ಹಣದುಬ್ಬರ, ನಿರುದ್ಯೋಗ, ಸಂಬಳ ಕಡಿತ ಮತ್ತು ಮಿತಿಮೀರಿದ ಭ್ರಷ್ಟಾಚಾರ ಇವೇ ಮುಂತಾದ ಸಮಸ್ಯೆಗಳಿಂದ ಕಂಗಾಲಾಗಿರುವ ಕನ್ನಡಿಗರಿಗೆ 'ವಿದ್ಯುತ್ ಬರೆ' ಹಾಕಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿರುವ ಜೆಡಿಎಸ್, ಡಬಲ್ ಎಂಜಿನ್ ಬಿಜೆಪಿಯವರೆ, ಕನ್ನಡಿಗರನ್ನು ಮುಳುಗಿಸುವವರೆಗೂ ಸಮಾಧಾನ ಇಲ್ಲವೆ? ಎಂದು ಪ್ರಶ್ನಿಸಿದೆ.

ವಿದ್ಯುತ್ ದರ ಏರಿಕೆಗೆ ಎಸ್ಕಾಂ ಚಿಂತನೆ: ಎಫ್'ಕೆಸಿಸಿಐ ವಿರೋಧ
ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ವಿರೋಧ ವ್ಯಕ್ತಪಡಿಸಿದೆ.

ವಿಧಾನಸಭಾ ಚುನಾವಣೆ 2023: ಮತದಾರರ ಓಲೈಕೆಗೆ ಬಿಜೆಪಿ ತಂತ್ರ, ವಿದ್ಯುತ್ ದರ ಕಡಿತಗೊಳಿಸಲು ಸರ್ಕಾರ ಮುಂದು!
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವೆ ಮತದಾರರ ಓಲೈಸಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಇದರಂತೆ ವಿದ್ಯುತ್ ದರವನ್ನು ಹೆಚ್ಚಿಸುವ ವಿದ್ಯುತ್ ಸರಬರಾಜು ನಿಗಮಗಳ (ಎಸ್ಕಾಂ) ಬೇಡಿಕೆಯ ಹೊರತಾಗಿಯೂ ವಿದ್ಯುತ್ ದರ ಕಡಿತಗೊಳಿಸಲು ಮುಂದಾಗಿದೆ.

