ದೇಶ'ಬಿಪೊರ್ ಜೋಯ್' ಅಬ್ಬರ: ಗುಜರಾತ್ ನ ಭಾವನಗರ ಜಿಲ್ಲೆಯಲ್ಲಿ ತಂದೆ-ಮಗ ಸಾವು, ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು
ನಿನ್ನೆ ಗುರುವಾರ ಸಂಜೆ ಗುಜರಾತಿನ ಜಖೌ ಬಂದರಿನ ಬಳಿ ಬಿಪೊರ್ಜೋಯ್ ಚಂಡಮಾರುತ ತೀವ್ರ ಪ್ರಮಾಣದಲ್ಲಿ ಬೀಸಿ ಭೂಕುಸಿತವನ್ನು ಉಂಟುಮಾಡಿತು, ಗಂಟೆಗೆ 115-125 ಕಿಲೋಮೀಟರ್ ವೇಗದಲ್ಲಿ 140 ಕಿಲೋ ಮೀಟರ್ ಪ್ರದೇಶದವರೆಗೆ ಗಾಳಿ ಬೀಸಿದ್ದು ಭಾರಿ ಮಳೆಯಾಗಿದೆ.