ವಿದೇಶಿಯರು

ವಿದೇಶಿಗರ ಅಕ್ರಮ ವಾಸ್ತವ್ಯಕ್ಕೆ ಸರ್ಕಾರ ಬ್ರೇಕ್: ಡ್ರಗ್ಸ್ ಸೇರಿ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ 365 ಮಂದಿ ಗಡಿಪಾರಿಗೆ ಸಿದ್ಧತೆ..!
ಕರ್ನಾಟಕದಲ್ಲಿ 365 ವಿದೇಶಿ ಪ್ರಜೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರ ಪೈಕಿ ಸುಮಾರು 60–70 ಪ್ರತಿಶತ ಮಂದಿ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

11 ವಿದೇಶಿಯರ ಬಳಿ ಕರ್ನಾಟಕದ Voter ID: ಚುನಾವಣಾ ಆಯೋಗದಿಂದ ತನಿಖೆ ಆರಂಭ
ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ 11 ಮಂದಿಯ ಮತದಾನದ ವಿವರಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

ವೀಸಾ ಅವಧಿ ಮೀರಿದ್ದರೂ ರಾಜ್ಯದಲ್ಲಿ 588 ಮಂದಿ ವಿದೇಶಿಯರು ವಾಸ; ಬೆಂಗಳೂರೇ ಹಾಟ್‌ಸ್ಪಾಟ್..!
ಅಕ್ರಮವಾಗಿ ದೇಶ ಪ್ರವೇಶಿಸಿದ 531 ವಿದೇಶಿಗರಲ್ಲಿ 439 ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ 330 ಮಂದಿ ಬಾಂಗ್ಲಾದೇಶ ಮೂಲದವರಾಗಿದ್ದು, 42 ಮಂದಿ ನೈಜೀರಿಯಾ, 4 ಮಂದಿ ಇರಾನ್, 38 ಮಂದಿ ಶ್ರೀಲಂಕಾ ಮತ್ತು ಒಬ್ಬ ಪಾಕಿಸ್ತಾನ ಮೂಲದವರಾಗಿದ್ದಾರೆ.

ದಾವಣಗೆರೆ: ಜಿಲ್ಲೆಗೆ ಬರುವ ವಿದೇಶಿಯರಿಗೆ 'ಡೆಲ್ಟಾ ಪ್ಲಸ್' ರೂಪಾಂತರಿ ವೈರಸ್ ಪರೀಕ್ಷೆ!
ದಾವಣಗೆರೆಗೆ ಬರುವ ಪ್ರತೀ ವಿದೇಶಿಯರನ್ನು ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಹಾಗೂ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರು ಹೇಳಿದ್ದಾರೆ.

5 ವರ್ಗದ ವಿದೇಶಿಯರಿಗೆ ಭಾರತಕ್ಕೆ ಬರಲು ಗೃಹ ಸಚಿವಾಲಯ ಅನುಮತಿ: ಯಾವುದು ಆ ಐದು ವರ್ಗ?
ಕೊರೋನಾ ವೈರಸ್ ಸೋಂಕಿನ ಸಮಸ್ಯೆಯಿಂದಾಗಿ ಸುಮಾರು ಮೂರು ತಿಂಗಳಿನಿಂದ ವಿದೇಶಿಯರು ಭಾರತಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿದ್ದ ನಂತರ ಇದೀಗ ಕೇಂದ್ರ ಸರ್ಕಾರ ಐದು ವರ್ಗದ ವಿದೇಶಿಯರು ಭಾರತಕ್ಕೆ ಪ್ರವೇಶಿಸಬಹುದು ಎಂದು ಅನುಮತಿ ಕೊಟ್ಟಿದೆ.

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ವೈರಸ್ ಪತ್ತೆ: 300 ಮಂದಿ ವಿದೇಶಿಯರು ಬ್ಲಾಕ್'ಲಿಸ್ಟ್'ಗೆ
ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ತಿಳಿಸಿದ್ದಾರೆ.

ಕೊರೋನಾವೈರಸ್: ವಿದೇಶಗಳಲ್ಲಿ 276 ಮಂದಿ ಭಾರತೀಯರಲ್ಲಿ ಸೋಂಕು
ವಿದೇಶಗಳಲ್ಲಿ 276 ಮಂದಿ ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಭಾರತೀಯರು, ಇತರ ವಿದೇಶಿಯರನ್ನು ಆತಿಥ್ಯ ಉದ್ಯೋಗದಿಂದ ಬ್ಯಾನ್ ಮಾಡಿದ ಸೌದಿ ಅರೇಬಿಯಾ
ಈ ವರ್ಷಾಂತ್ಯದೊಳಗೆ ಆತಿಥ್ಯದ ಉದ್ಯೋಗಗಳನ್ನು ತನ್ನ ದೇಶದ ನಾಗರಿಕರಿಗೆ ಸೀಮಿತಗೊಳಿಸಲು ಚಿಂತಿಸಿರುವ ಸೌದಿ ಅರಬೀಯಾ, ಭಾರತೀಯರು ಸೇರಿದಂತೆ ಇನ್ನಿತರ ವಿದೇಶಿ ನೌಕರರ ನೇಮಕಾತಿಯನ್ನು ನಿರ್ಬಂಧಿಸಿದೆ.

ಹಿಮಾಚಲ ಪ್ರದೇಶ: 10 ಮಂದಿ ವಿದೇಶಿಯರು ಸೇರಿ 16 ಮಂದಿ ಚಾರಣಿಗರು ನಾಪತ್ತೆ
ಹಿಮಾಚಲ ಪ್ರದೇಶದಲ್ಲಿ ಚಾರಣಕ್ಕೆಂದು ತೆರಳಿದ್ದ 10 ಮಂದಿ ವಿದೇಶಿಯರು ಸೇರಿ 16 ಮಂದಿ ನಾಪತ್ತೆಯಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ...

