ದೇಶ'ಬಾಂಗ್ಲಾದೇಶ ಜೊತೆ ಭಾರತ ನಿಕಟ-ಸ್ನೇಹಪರ ಸಂಬಂಧ ಬಯಸುತ್ತದೆ, ಶೇಖ್ ಹಸೀನಾ ಹಸ್ತಾಂತರ ವಿಷಯ ಪರಿಶೀಲನೆಯಲ್ಲಿದೆ': ವಿದೇಶಾಂಗ ಸಚಿವಾಲಯ
ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದ ಬಗ್ಗೆ ಭಾರತದ ವಿಶಾಲ ದೃಷ್ಟಿಕೋನವನ್ನು ವಿವರಿಸಿದರು. ಬಾಂಗ್ಲಾದೇಶದ ಜನರೊಂದಿಗಿನ ಸಂಬಂಧಕ್ಕೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.