ರಾಜ್ಯವಿದೇಶದಿಂದ ಪ್ರಯಾಣಿಕರ ಆಗಮನ ಹಿನ್ನೆಲೆ: ಸಚಿವರುಗಳಿಂದ ಪರೀಕ್ಷೆ, ಸ್ಕ್ರೀನಿಂಗ್ ಸಿದ್ಧತೆಗಳ ಪರಿಶೀಲನೆ
ವಿದೇಶದಲ್ಲಿರುವ ಕನ್ನಡಿಗರು ಮೇ 11ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.