ರಾಜ್ಯವಿದೇಶಗಳಲ್ಲೂ ಮೈಸೂರು ಸಿಲ್ಕ್ ಮಳಿಗೆ ಆರಂಭ: ಸಚಿವ ನಾರಾಯಣ ಗೌಡ
ಭಾರತೀಯ ಸಂಸ್ಕೃತಿಯ ಪ್ರತೀಕವಾದ ಮೈಸೂರು ರೇಷ್ಮೆ ಸೀರೆಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಲಂಡನ್, ಅಮೆರಿಕ, ದೆಹಲಿ ಸೇರಿದಂತೆ ವಿಶ್ವದ ಅನೇಕ ಕಡೆ ಮೈಸೂರು ರೇಷ್ಮೇ ಸೀರೆಗಳ ಮಾರಾಟ ಮಳಿಗೆ ಆರಂಭಿಸುವ ಚಿಂತನೆ ನಡೆದಿದೆ ಎಂದು ರಾಜ್ಯ ತೋಟಗಾರಿಕೆ, ರೇಷ್ಮೇ ಖಾತೆ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ.