ದೇಶ1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ವಿಜಯದ ಸಂಕೇತ 'ವಿಜಯ್ ದಿವಸ್' ಆಚರಣೆ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ನಮನ
ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ-Vijay Diwas. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಹಾಗೂ ಆತ್ಮಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ.