ರಾಜ್ಯವಾಯುಪಡೆ ಹೆಲಿಕಾಪ್ಟರ್ ನೆಲೆ ಮೈಸೂರಿಗೆ ಸ್ಥಳಾಂತರ ಇಲ್ಲ
ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಬೆಂಗಳೂರಿನ ಯಲಹಂಕದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಡುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ಮಂಗಳವಾರ ಹೇಳಿದ್ದಾರೆ.