ವಲಸೆ ಕಾರ್ಮಿಕ ಮಹಿಳೆ

ತನ್ನ ಮಗುವಿಗೆ 'ಸೋನು ಸೂದ್' ಎಂದು ಹೆಸರಿಟ್ಟ ವಲಸೆ ಕಾರ್ಮಿಕ ಮಹಿಳೆ!
ಲಾಕ್ ಡೌನ್ ಮಧ್ಯೆ ಸಿಕ್ಕಿಬಿದ್ದ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ಸ್ವಂತ ಊರುಗಳಿಗೆ ತಲುಪಲು ನಿರಂತರ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾಳೆ.

ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮವಿತ್ತ ವಲಸೆ ಕಾರ್ಮಿಕ ಮಹಿಳೆ, ಜನಿಸಿದ ಕೆಲ ಗಂಟೆಗಳಲ್ಲಿ ಶಿಶುಗಳು ಸಾವು
ಆರು ತಿಂಗಳ ಗರ್ಭಿಣಿಯಾಗಿದ್ದ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಶ್ರಮಿಕ್ ರೈಲಿನಲ್ಲೇ ಗರ್ಭಿಣಿಯ ಪ್ರಸವ ಮಾಡಿಸಿ ಮಾನವೀಯತೆ ಮೆರೆದ ಸಿಬ್ಬಂದಿ
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲುಕಿರುವ ಹೊರರಾಜ್ಯದ ಕಾರ್ಮಿಕರನ್ನು ಅವರ ತವರೂರಿಗೆ ಕಳುಹಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನೈಋತ್ಯ ರೈಲ್ವೆ ಸಿಬ್ಬಂದಿ, ಮಾರ್ಗಮಧ್ಯದಲ್ಲಿ ಗರ್ಭಿಣಿಯೋರ್ವರ ಪ್ರಸವ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಛತ್ತೀಸ್ ಗಢ: ಚಲಿಸುತ್ತಿದ್ದ ಟ್ರಕ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ!
ಮಧ್ಯಪ್ರದೇಶದಿಂದ ತನ್ನ ಮನೆ ಕಡೆ ವಾಪಸ್ಸಾಗುತ್ತಿದ್ದ ವಲಸಿಗ ಗರ್ಭಿಣಿ ಮಹಿಳೆಯೊಬ್ಬರು ಮಧ್ಯರಾತ್ರಿಯಲ್ಲಿ ಚಲಿಸುತ್ತಿದ್ದ ಟ್ರಕ್ ನಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

