ರಾಜ್ಯಬೆಂಗಳೂರು: 3 ದಿನ ವರ್ಚುಯಲ್ ಕರೆ, ಉದ್ಯಮಿಗೆ 1.98 ಕೋಟಿ ರೂ. ವಂಚಿಸಿದ ಸೈಬರ್ ವಂಚಕರು!
ಮೂರು ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ ಬೀಳಿಸಿದ ವಂಚಕರು, ಆತನ ಹೆಸರಿನಲ್ಲಿರುವ ಫೆಡೆಕ್ಸ್ ಕೊರಿಯರ್ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.