ವಕ್ಫ್ ವಿವಾದ

ವಕ್ಫ್ ಮಸೂದೆ ಕುರಿತು ಪ್ರಚೋದನಕಾರಿ ಹೇಳಿಕೆ; ಇಬ್ಬರ ಬಂಧನ
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಬೀರ್ ಖಾನ್ ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Waqf row: ಹೊನವಾಡ ಗ್ರಾಮದಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಲು ಸಾಧ್ಯನಾ? ಅಮಿತ್ ಶಾಗೆ ತಪ್ಪು ಗ್ರಹಿಕೆ- ಎಂ.ಬಿ ಪಾಟೀಲ್
ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿಜಯಪುರದ ಹೊನವಾಡ ಗ್ರಾಮದ್ದು ಪ್ರಸ್ತಾಪಿಸಿದ್ದಾರೆ. ತೇಜಸ್ವಿ ಸೂರ್ಯ ಕೂಡಾ ಪ್ರಸ್ತಾಪಿಸಿದ್ದಾರೆ.

ವಕ್ಫ್ ವಿವಾದ: ಯತ್ನಾಳ್ ಟೀಮ್ ಗೌಪ್ಯ ಸಭೆ, 2ನೇ ಸುತ್ತಿನ ಹೋರಾಟಕ್ಕೆ ಪ್ಲ್ಯಾನ್..!
ಯತ್ನಾಳ್ ಸೇರಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಪಿ.ಹರೀಶ್, ಮುಖಂಡ ಎನ್.ಆರ್.ಸಂತೋಷ್ ಅವರು ಉಪಸ್ಥಿತರಿದ್ದರು.

ಬೆಳಗಾವಿ ಅಧಿವೇಶನ: ವಕ್ಫ್ ಜಮೀನಿನಲ್ಲಿರುವ ದೇವಾಲಯ ತೆರವುಗೊಳಿಸಲ್ಲ; ಸಿಎಂ ಹೇಳಿಕೆಯಿಂದ ತೃಪ್ತರಾಗದ ಬಿಜೆಪಿ ಸಭಾತ್ಯಾಗ!
ಉಳುಮೆ ಮಾಡುತ್ತಿರುವ ಭೂಮಿಯಿಂದ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ .ರಾಜ್ಯದಲ್ಲಿ 1.10 ಲಕ್ಷ ಎಕರೆ ವಕ್ಫ್ ಆಸ್ತಿಗಳಿದ್ದು, ಇನಾಂ ನಿರ್ಮೂಲನೆ ಕಾಯ್ದೆ ಹಾಗೂ ಒತ್ತುವರಿಯಂತಹ ವಿವಿಧ ಕಾರಣಗಳಿಂದ ಈಗ ಕೇವಲ 20,000 ಎಕರೆಗೆ ಇಳಿದಿದ್ದು, ವಕ್ಫ್ ಆಸ್ತಿಗಳನ್ನು ಉಳಿಸುವುದು ಅಗತ್ಯವಾಗಿದೆ.

Waqf ಅತಿಕ್ರಮಣ ಮುಚ್ಚಿಡಲು BJP 150 ಕೋಟಿ ಆಮಿಷ: CBI ತನಿಖೆಗೆ BYV ಆಗ್ರಹ; ಶ್ಯೂರಿಟಿ ಬಾಂಡ್‌ಗೆ ಸಹಿ ಹಾಕಿದ ದರ್ಶನ್; ಡ್ರೋನ್ ಪ್ರತಾಪ್ ಗೆ 10 ದಿನ ನ್ಯಾಯಾಂಗ ಬಂಧನ!

150 ಕೋಟಿ ರೂ. ಆಮಿಷದ ಬಗ್ಗೆ ಸಿಬಿಐ ತನಿಖೆಗೆ ವಹಿಸಲಿ: ವಿಧಾನಸಭೆಯಲ್ಲಿ ವಿಜಯೇಂದ್ರ ಆಗ್ರಹ
ಇಂದು ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿದ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಕ್ಫ್ ವರದಿ: ಮಾಣಿಪ್ಪಾಡಿಗೆ 150 ಕೋಟಿ ರೂ ಆಮಿಷ; ಸದನದಲ್ಲಿಂದು ಚರ್ಚೆ ಸಾಧ್ಯತೆ
ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರಂಭದಲ್ಲಿ ಯಾವ ರೀತಿ ಹೇಳಿಕೆ ನೀಡಿದ್ದರು ಎಂಬುದು ಕಣ್ಣೆದುರಿಗಿದೆ. ಆದರೀಗ ಮಾತು ತಿರುಚಿರುವುದು ಸ್ಪಷ್ಟವಾಗುತ್ತಿದೆ.

ಅವರದ್ದೇ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದೆ, ಮಾಣಿಪ್ಪಾಡಿ ಉಲ್ಡಾ ಹೊಡೆಯುತ್ತಿರುವುದೇಕೆ?: ಸಿಎಂ ಸಿದ್ದರಾಮಯ್ಯ
ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಅವರೇ ಮೋದಿ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆಗೆ ವಿಡಿಯೋ ರೆಕಾರ್ಡ್ ಸಾಕ್ಷಿ ಇದೆ. ಬದಲಾವಣೆ ಮಾಡಿಸಿ ಬಿಜೆಪಿಯವರೇ ಹೇಳಿಸಿರಬಹುದು.

ವಕ್ಫ್ ವರದಿ ಮುಚ್ಚಿ ಹಾಕಲು ಸಾವಿರಾರು ಕೋಟಿ ಆಮಿಷ ಒಡ್ಡಿದ್ದು ಕಾಂಗ್ರೆಸ್: ಅನ್ವರ್ ಮಾಣಿಪ್ಪಾಡಿ ಹೊಸ ಬಾಂಬ್
2012-13ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ರೆಡಿ ಮಾಡುತ್ತಿದ್ದಾಗ ವಿಜಯೇಂದ್ರ ಏನೂ ಆಗಿರಲಿಲ್ಲ. ಯಡಿಯೂರಪ್ಪ ಪುತ್ರ ಅಷ್ಟೇ ಆಗಿದ್ದರು. 2019ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ವಕ್ಫ್ ಆಸ್ತಿ ಕುರಿತ ವರದಿ ಜಾರಿಗೊಳಿಸಬೇಕೆಂದು ಆಗ್ರಹ ಮಾಡಿದ್ದೆ.

